

22nd January 2025

ಜಮಖಂಡಿ : ನಗರ ಅಭಿವೃದ್ದಿಗೆ ಸಭೆಯು ಅರ್ಥಪೂರ್ಣವಾಗಿ ನಡೆಯಬೇಕು, ಇಲ್ಲಿನ ಒಂದೊಂದು ನಿಮಿಷ ಅತ್ಯಮೂಲ್ಯವಾಗಿದೆ, ಅಭಿವೃದ್ಧಿಗೆ ನಾವೆಲ್ಲರೂ ಒಂದೆಯಾಗಿರಬೇಕು, ಪಕ್ಷಬೇದ ಇಲ್ಲಿರಬಾರದು, ನಗರದಲ್ಲಿ ಜನ ಮತ್ತು ವಾಹನ ದಟ್ಟನೆ ದಿನದಿಂದ ದಿನಕ್ಕೆ ಬಹಳಷ್ಟು ಹೆಚ್ಚಾಗುತ್ತಿದೆ, ಮಹಾರಾಜರ ಕಾಲದಿಂದಲೂ ಒಳಚರಂಡಿ ವ್ಯವಸ್ಥೆ ಇಲ್ಲಿಯವರೆಗೂ ಹಾಗೆ ಇರುವದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಇದಕ್ಕೆ ಪರ್ಯಾಯವಾಗಿ ಹೊಸ ಜಮಖಂಡಿ ನಿರ್ಮಿಸುವ ನಿಟ್ಟಿನಲ್ಲಿ ಒಂದು ವಿಶೇಷ ಯೋಜನೆ ಹಾಕಿಕೊಂಡಿದ್ದೆನೆ ಈಗಾಗಲೇ ನಾನು ಕಂದಾಯ ಸಚಿವರನ್ನು, ಡಿಸಿಎಂ ಅವರನ್ನು ಭೆಟ್ಟಿ ಯಾಗಿ ಚರ್ಚಿಸಿದ್ದೆನೆ ಅದಕ್ಕೆ ಅವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಕೆಲಸ ಆಗುವ ಮುಂಚೆ ಮಾತನಾಡಬಾರದು ನಮ್ಮ ಕೆಲಸಗಳೆ ಮಾತನಾಡಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದಲ್ಲಿನ ಬಿಡಾಡಿ ದನಗಳಿಂದ ಸಾವು ನೋವುಗಳಾಗುತ್ತಿವೆ ಅವುಗಳನ್ನು ಗೋ ಶಾಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿ, ಇಲ್ಲ ಬಿಡಾಡಿ ದನಗಳ ಮಾಲಿಕರಿಗೆ ಕಟ್ಟುನಿಟ್ಟಾಗಿ ವಾರ್ನಿಂಗ್ ನೀಡಿ, ದಂಡ ಕಟ್ಟಿ ಅವರಿಗೆ ಮನವರಿಕೆ ಮಾಡಿ ಇದರಿಂದ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ ಎಂದು ಶಾಸಕರು ಸೂಚಿಸಿದರು.
ನಗರ ಪ್ರದೇಶದಲ್ಲಿನ ರಸ್ತೆ ಸೇರಿದಂತೆ ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸುವುದಕ್ಕೆ ಎಲ್ಲ ಸದಸ್ಯರು ಒಕ್ಕೂರಲವಾಗಿ ಸಮ್ಮತಿಸಿದರು.
ಪೌರಾಯುಕ್ತ ಜ್ಯೋತಿ ಗಿರೀಶ ಮಾತನಾಡಿ, ಹಳೆಯದಾದ ನಗರಸಭೆ ಕಟ್ಟಡವನ್ನು ಮರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಪೋಸಲ್ ಕಳುಹಿಸಲಾಗಿದೆ ಎಂದರು.
ನಗರದಲ್ಲಿ ಬಿದಿ ನಾಯಿಗಳ ಸಂತತಿ, ಉಪಟಳ ಬಹಳಷ್ಟಾಗುತ್ತಿದೆ ಕೂಡಲೆ ಅವುಗಳ ನಿಯಂತ್ರಣ ಮಾಡಬೇಕು ಎಂದು ಸಂತಾಣ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಈ ಕುರಿತು ಬೆಂಗಳೂರಿನ ಕಂಪನಿಯೊಂದಿಗೆ ಟೆಂಡರ್ ಪ್ರಕ್ರೀಯೇಯಾಗಿದೆ ಎಂದು ಪೌರಾಯುಕ್ತ ತಿಳಿಸಿದರು.
ನಗರದಲ್ಲಿನ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸಲಾಗುವುದು, ನಗರಸಭೆ ವ್ಯಾಪ್ತಿಯಲ್ಲೆ ಇರುವ ಇಂಡಸ್ಟ್ರಿಯಲ್ ಏರಿಯಾ ರಾಮ್ ಭಾಗವನ್ನು ನಗರಸಭೆಗೆ ಸೆರ್ಪಡೆ ಮಾಡಿಕೊಳ್ಳಲಾಗುವುದು ಇದರಿಂದ ಟ್ಯಾಕ್ಸ್ ಆದಾಯ ಬರುತ್ತದೆ ಎಂದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಉಪಾಧ್ಯಕ್ಷೆ ರೇಖಾ ಕಾಂಬಳೆ ಇದ್ದರು.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025